ಉಡುಪಿ ಕೃಷ್ಣಭವನ್ ಬೆಂಗಳೂರಿನ ಬಳೇಪೇಟೆಯಲ್ಲಿ ಇರುವ ಒಂದು ಉಡುಪಿ ಖಾದ್ಯಶೈಲಿಯ ಉಪಹಾರಗೃಹ. ಇದು ವಿಶಾಲವಾಗಿದ್ದು, ಬಳೆಪೇಟೆಯಂತಹ ಜನಸಂದಣಿಯ ಮಧ್ಯೆಯೂ ಕುಳಿತುಕೊಂಡು, ಇಡ್ಲಿ, ವಡೆ, ದೋಸೆ, ಚೌಚೌಭಾತ್, ಸವಿಯಲು ಅನುಕೂಲವಾದ ಪರಿಸರ ಹೊಂದಿದೆ.